ಶ್ರೀ ತುಲಸೀದಾಸ ವಿರಚಿತ
“ಹನುಮಾನ್ ಚಾಲೀಸಾ”
ಕನ್ನಡ ಅನುವಾದ
ಅನುವಾದಕರು: ಪಂಡಿತ್ ಶ್ರೀ ಜಿ ಜಯರಾಮ್
ಮೂಲ ಕೃಪೆ
ಶ್ರೀ ಬ್ರಹ್ಮ ಚೈತನ್ಯ ಶ್ರೀರಾಮ ಮಂದಿರ
ಎನ್ ಆರ್ ಬಡಾವಣೆ
ಚಿಂತಾಮಣಿ 563125
ಪ್ರಾರ್ಥನಾ ಶ್ಲೋಕ
ಶ್ರೀಗುರುಚರಣ ಸರೋಜ ರಜದಿಂ |
ಮನದರ್ಪಣ ಸ್ವಚ್ಛ ಮಾಡುವೆನು |
ನಾಲ್ಕು ಪುರುಷಾರ್ಥವನೀವ |
ಶ್ರೀರಾಮ ಕೀರ್ತಿಯ ಬಣ್ಣಿಸಿ ಪಾಡುವೆನು ||
ಬುದ್ಧಿಹೀನನ ಮೊರೆಯನಾಲಿಸಿ |
ಪವನ ಕುಮಾರ ಸುಬುದ್ಧಿಯ ನೀಡು |
ಪಂಚಕ್ಲೇಶ ಷಡ್ವಿಕಾರಗಳನು |
ನಾಶಗೊಳಿಸಿ ಬಲಬುದ್ಧಿಯ ನೀಡು ||
ಹನುಮಾನ್
ಚಾಲೀಸಾ
ಜಯ ಹನುಮಾನ
ಜ್ಞಾನಗುಣಸಾಗರ
ಜಯ ಕಪೀಶ
ಮೂಲೋಕ ಪ್ರಭಾಕರ ||1||
ರಾಮದೂತ
ಅತುಲಿತ ಬಲಧಾಮ
ಅಂಜನಿಪುತ್ರ
ಪವನಸುತ ನಾಮ ||2||
ಮಹಾವೀರ
ವಿಕ್ರಮ ಬಜರಂಗೀ
ಕುಮತಿ
ನಿವಾರಕ ಸುಮತಿಯ ಸಂಗೀ ||3||
ಕಾಂಚನ ರಂಜತ
ಸುಂದರ ವೇಷ
ಕರ್ಣಕುಂಡಲ
ಗುಂಗುರುಕೇಶ ||4||
ವಜ್ರಗದಾಧರ
ಧ್ವಜಕರಶೋಭಿತ
ಸುಂದರಭುಜ
ಉಪವೀತ ಅಲಂಕೃತ ||5||
ಶಂಕರಕುವರ
ಕೇಸರೀ ನಂದನ
ತೇಜಪ್ರತಾಪ
ಮಹಾ ಜಗವಂದನ ||6||
ವಿದ್ಯಾವಾನ
ಗುಣೀ ಅತಿ ಚತುರ
ರಾಮಕಾರ್ಯವೆಸಗೆ
ಬಲು ಕಾತುರ ||7||
ಪ್ರಭುಕಥೆ
ಕೇಳುತ ಮೈಮರೆವಾತ
ಮನವಿ ರಾಮ
ಸೌಮಿತ್ರಿ ಸೀತ ||8||
ಸೂಕ್ಷ್ಮರೂಪವನು
ಸೀತೆಗೆ ತೋರಿದೆ
ವಿಕಟರೂಪದಲಿ
ಲಂಕೆಯ ದಹಿಸಿದೆ ||9||
ಭೀಮರೂಪದಲಿ
ಅಸುರರ ಕೊಂದೆ
ರಾಮಚಂದ್ರನ
ಕಾರ್ಯವೆಸಗಿದೆ ||10||
ಮೂಲಿಕೆ
ತಂದು ಸೌಮಿತ್ರಿಯ ಪೊರೆದೆ
ರಾಮನ
ಪ್ರೀತಿಯ ಅಪ್ಪುಗೆ ಪಡೆದೆ ||11||
ಭರತನಂತೆ
ನೀನು ಪ್ರಿಯಸಹೋದರ
ಎನ್ನುತ
ಹೊಗಳಿದ ಶ್ರೀರಘುವೀರ ||12||
ಸಹಸ್ರಮುಖವು
ನಿನ್ನ ಸ್ತುತಿಸಿದೆ
ಎನ್ನುತ
ಶ್ರೀಪತಿ ಆಲಿಂಗಿಸಿದ ||13||
ಸನಕಬ್ರಹ್ಮಾದಿ
ಮುನಿವರೇಣ್ಯರು
ನಾರದ ಶಾರದೆ
ಆದಿಶೇಷರು ||14||
ಯಮಕುಬೇರ
ದಿಕ್ಪಾಲಕರೆಲ್ಲರು
ಕವಿಕೋವಿದರು
ನಿನ್ನ ಸ್ತುತಿಸಿಹರು ||15||
ಸುಗ್ರೀವಗೆ
ನೀ ಸಹಾಯ ಮಾಡಿದೆ
ರಾಮಸಖ್ಯದಿ
ರಾಜ್ಯ ಕೊಡಿಸಿದೆ ||16||
ನಿನ್ನುಪದೇಶ
ವಿಭೀಷಣ ಒಪ್ಪಿದ
ಲಂಕೇಶನಾದುದ
ಜಗವೇ ಬಲ್ಲದು ||17||
ಮಧುರ
ಹಣ್ಣೆಂದು ತಿಳಿದು ರವಿಯನು
ಪಿಡಿಯೆ
ಹಾರಿದೆ ಸಹಸ್ರಯೋಜನ ||18||
ಪ್ರಭುಮುದ್ರಿಕೆಯನು
ಧರಿಸಿ ಬಾಯಲಿ
ಶರಧಿ
ಲಂಘನವು ಸೋಜಿಗವಲ್ಲ ||19||
ಎಷ್ಟೇ ಕಠಿಣ
ಕಾರ್ಯವೇ ಇರಲಿ
ಅಷ್ಟೇ ಸುಲಭ
ನಿನ್ನ ಕೃಪೆಯಿಂದಲಿ ||20||
ರಾಮನ
ದ್ವಾರಪಾಲಕ ನೀನು
ನಿನ್ನಾಜ್ಞೆ
ವಿನಾ ಒಳ ಬರಲಾರೆನು ||21||
ಸುಖವೆಲ್ಲ
ನಿನಗೆ ಶರಣಾಗಿ ಇರಲು
ಭಯವೇಕೆ
ಎಮಗೆ ನೀ ರಕ್ಷಿಸಲು ||22||
ನಿನ್ನ ತೇಜ
ನಿನ್ನಂದಲೆ ಶಮನ
ನಿನ್ನ
ಘರ್ಜನೆಗೆ ತ್ರಿಲೋಕ ಕಂಪನ ||23||
ಮಹಾವೀರ
ನಿನ್ನ ನಾಮವ ಕೇಳಲು
ಸನಿಹಕೆ
ಬರದು ಭೂತಪ್ರೇತಗಳು ||24||
ಹನುಮ
ನಿನ್ನನು ಸದಾ ಭಜಿಸಲು
ನಾಶವಾಗುವುವು
ರೋಗರುಜಗಳು ||25||
ಹನುಮನ ಧ್ಯಾನಿಸೆ
ತ್ರಿಕರಣದಿಂದ
ಕಷ್ಟಕಾರ್ಪಣ್ಯವು
ದೂರಾಗುವುದು ||26||
ತಪಸ್ವೀರಾಮನ
ಕಾರ್ಯಗಳೆಲ್ಲವ
ಯಶಸ್ಸಿನಿಂದ
ಸಫಲಗೊಳಿಸಿದವ ||27||
ನೆರವೇರಿಸುತಲಿ
ಭಕ್ತರಾಭೀಷ್ಟವ
ಅಮಿತ ಫಲವನು
ನೀ ಕರುಣಿಸುವೆ ||28||
ನಾಲ್ಕು
ಯುಗದಲೂ ಪ್ರತಾಪ ನಿನ್ನದೆ
ನಿನ್ನಯ
ಪ್ರಭೆಯ ಲೋಕ ಬೆಳಗಿದೆ ||27||
ಸಾಧುಸಂತರನು
ಪೊರೆದು ಸಲಹಿದೆ
ಅಸುರರ ಕೊಂದು
ರಾಮಪ್ರಿಯನಾದೆ ||20||
ಅಷ್ಟಸಿದ್ಧಿ
ನವನಿಧಿಯ ಕೊಡುವವ
ಜಾನಕಿ
ಮಾತೆಯಿಂ ವರವ ಪಡೆದವ ||31||
ನಿನ್ನಲಿ
ಇರಲು ರಾಮರಸಾಯನ
ಸದಾ
ರಘುಪತಿಯ ದಾಸನು ನೀನು ||32||
ನಿನ್ನ
ಭಜಿಸಿದವ ರಾಮನ ಪಡೆವ
ಜನ್ಮಜನ್ಮದ
ದುಃಖವ ಮರೆವ ||33||
ಜೀವಿಸಿರಲು
ಹರಿಭಕ್ತನೆನಿಸುವ
ಅಂತ್ಯಸಮಯದಿ
ರಾಮನ ಸೇರುವ ||34||
ಅನ್ಯದೇವರನು
ಭಜಿಸದಿದ್ದರು
ಹನುಮನ
ಸೇವಿಸೆ ಸುಖವ ಪಡೆವರು ||35||
ವೀರ ಹನುಮನ
ಭಜಿಸಲು ಭಕ್ತರು
ವ್ಯಾಧಿ
ಸಂಕಟದಿ ಮುಕ್ತಿ ಪಡೆವರು ||36||
ಜಯ ಜಯ ಜಯ
ಹನುಮಾನ ಗೋಸಾಯಿ
ಗುರುವಿನಂದದಿ
ಕೃಪೆ ಇದು ಸಾಯಿ ||37||
ನೂರು ಬಾರಿ
ಇದ ಪಠಣ ಮಾಡಿದವ
ಬಂಧನ ಕಳಚುತ
ನಿಜ ಸುಖ ಪಡೆವ ||38||
ಯಾರು
ಪಠಿಸುವರೊ ಹನುಮ ಚಾಲೀಸ
ಸಿದ್ಧಿ
ಪಡೆಯುವರು ಸಾಕ್ಷಿ ಗೌರೀಶ ||39||
ತುಲಸೀದಾಸ
ಸದಾ ಹರಿಭಕ್ತ
ವಾಸಿಸು
ಎನ್ನ ಹೃದಯದಿ ನಾಥ ||40||
ಪರಮ ಭಕ್ತ
ಶ್ರೀ ತುಲಸೀದಾಸರ
ಚರಣಕೆ
ವಂದಿಪೆ ನಿತ್ಯ ನಿರಂತರ ||41||
ಹನುಮ
ದಯೆಯಿಂ ಅತನ ಚರಿತೆಯ
ಕನ್ನಡ
ಭಾಷೆಗೆ ಬರೆದಂತಾಯ್ತು ||42||
ಇಂತು
ಚೈತನ್ಯವ ನೀಡಿದ ಪ್ರಭುವನು
ಚೈತನ್ಯದಾಸ
ಭಕ್ತಿಲಿ ನಮಿಪನು ||43||
ಮಂಗಳ
ಶ್ಲೋಕ
ಪವನ ತನಯ
ಸಂಕಟಹರಣ ಮಂಗಳಮೂರುತಿ ರೂಪ
ರಾಮ
ಸೌಮಿತ್ರಿ ಸೀತಾ ಸಹಿತ ನೆಲೆಸು ಹೃದಯದಿ ಸುರಭೂಪ |
||ಓಂ
ಶಾಂತಿಃ ಶಾಂತಿಃ ಶಾಂತಿಃ||
Comments
Post a Comment