Posts

Showing posts with the label ಹನುಮಾನ್ ಚಾಲೀಸಾ ಕನ್ನಡ ಅನುವಾದ
ಶ್ರೀ ತುಲಸೀದಾಸ ವಿರಚಿತ “ ಹನುಮಾನ್‌ ಚಾಲೀಸಾ ” ಕನ್ನಡ ಅನುವಾದ ಅನುವಾದಕರು: ಪಂಡಿತ್‌ ಶ್ರೀ ಜಿ ಜಯರಾಮ್‌ ಮೂಲ ಕೃಪೆ ಶ್ರೀ ಬ್ರಹ್ಮ ಚೈತನ್ಯ ಶ್ರೀರಾಮ ಮಂದಿರ   ಎನ್‌ ಆರ್‌ ಬಡಾವಣೆ ಚಿಂತಾಮಣಿ 563125 ಪ್ರಾರ್ಥನಾ ಶ್ಲೋಕ ಶ್ರೀಗುರುಚರಣ ಸರೋಜ ರಜದಿಂ | ಮನದರ್ಪಣ ಸ್ವಚ್ಛ ಮಾಡುವೆನು | ನಾಲ್ಕು ಪುರುಷಾರ್ಥವನೀವ | ಶ್ರೀರಾಮ ಕೀರ್ತಿಯ ಬಣ್ಣಿಸಿ ಪಾಡುವೆನು || ಬುದ್ಧಿಹೀನನ ಮೊರೆಯನಾಲಿಸಿ | ಪವನ ಕುಮಾರ ಸುಬುದ್ಧಿಯ ನೀಡು | ಪಂಚಕ್ಲೇಶ ಷಡ್ವಿಕಾರಗಳನು | ನಾಶಗೊಳಿಸಿ ಬಲಬುದ್ಧಿಯ ನೀಡು || ಹನುಮಾನ್‌ ಚಾಲೀ ಸಾ ಜಯ ಹನುಮಾನ ಜ್ಞಾನಗುಣಸಾಗರ ಜಯ ಕಪೀಶ ಮೂಲೋಕ ಪ್ರಭಾಕರ ||1|| ರಾಮದೂತ ಅತುಲಿತ ಬಲಧಾಮ ಅಂಜನಿಪುತ್ರ ಪವನಸುತ ನಾಮ ||2|| ಮಹಾವೀರ ವಿಕ್ರಮ ಬಜರಂಗೀ ಕುಮತಿ ನಿವಾರಕ ಸುಮತಿಯ ಸಂಗೀ ||3|| ಕಾಂಚನ ರಂಜತ ಸುಂದರ ವೇಷ ಕರ್ಣಕುಂಡಲ ಗುಂಗುರುಕೇಶ ||4|| ವಜ್ರಗದಾಧರ ಧ್ವಜಕರಶೋಭಿತ ಸುಂದರಭುಜ ಉಪವೀತ ಅಲಂಕೃತ ||5|| ಶಂಕರಕುವರ ಕೇಸರೀ ನಂದನ ತೇಜಪ್ರತಾಪ ಮಹಾ ಜಗವಂದನ ||6|| ವಿದ್ಯಾವಾನ ಗುಣೀ ಅತಿ ಚತುರ ರಾಮಕಾರ್ಯವೆಸಗೆ ಬಲು ಕಾತುರ ||7|| ಪ್ರಭುಕಥೆ ಕೇಳುತ ಮೈಮರೆವಾತ ಮನವಿ ರಾಮ ಸೌಮಿತ್ರಿ ಸೀತ ||8|| ಸೂಕ್ಷ್ಮರೂಪವನು ಸೀತೆಗೆ ತೋರಿದೆ ವಿಕಟರೂಪದಲಿ ಲಂಕೆಯ ದಹಿಸಿದೆ ||9|| ಭೀಮರೂಪದಲಿ ಅಸುರರ ಕೊ...